ಡಾ.ಪ್ರಸನ್ನ ಕುಮಾರ್‌ ಐತಾಳರಿಗೆ ಉತ್ತಮ ಶಿಕ್ಷಕ ಪ್ರಶಸ್ತಿ.

ಮಂಗಳೂರಿನ ಶ್ರೀನಿವಾಸ ವಿಶ್ವವಿದ್ಯಾಲಯ ಹಾಗೂ ಸಮೂಹ ಸಂಸ್ಥೆಗಳ ಎ. ಶಾಮ ರಾವ್ ಫೌಂಡೇಶನ್ ವತಿಯಿಂದ ಸಂಸ್ಥಾಪಕರ ದಿನದ ಅಂಗವಾಗಿ ಕೊಡಮಾಡುವ ಎ. ಶಾಮ ರಾವ್ ಸ್ಮಾರಕ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿಯನ್ನು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜಿನ ಸಂಸ್ಕೃತ ಭಾಷಾ ವಿಭಾಗದ ಮುಖ್ಯಸ್ಥ ಡಾ. ಪ್ರಸನ್ನಕುಮಾರ ಐತಾಳ್ ಅವರು ಮಂಗಳೂರಿನ ಮುಕ್ಕದ ಶ್ರೀನಿವಾಸ ವಿಶ್ವವಿದ್ಯಾಲಯದಲ್ಲಿ ಫೆ. 14ರಂದು ನಡೆದ ಸಮಾರಂಭದಲ್ಲಿ ಸ್ವೀಕರಿಸಿದರು.