ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಎಜುಕೇಷನಲ್ ಸೊಸೈಟಿ (ರಿ ) ಉಜಿರೆ ಯ ವತಿಯಿಂದ ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿ ಪೂರ್ವ ಕಾಲೇಜು ಹಾಗೂ ಸನಿವಾಸ ಪದವಿ ಪೂರ್ವ ಕಾಲೇಜಿನ ವಿಜ್ಞಾನ ವಿಭಾಗದ ಉಪನ್ಯಾಸಕರಿಗಾಗಿ ಆಯೋಜಿಸಿರುವ “ಫೆಕಲ್ಟಿ ಡೆವಲಪ್ಮೆಂಟ್ ಕಾರ್ಯಾಗಾರ” ಉದ್ಘಾಟನಾ ಸಮಾರಂಭವು ಎಸ್ ಡಿ ಎಮ್ ಸ್ನಾತಕೋತ್ತರ ಕೇಂದ್ರದ ದೃಕ್ -ಶ್ರವಣ ಕೊಠಡಿ 0.1 ರಲ್ಲಿ ನಡೆಯಿತು.
ಉದ್ಘಾಟಕರಾಗಿ ಆಗಮಿಸಿದ್ದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಎಜುಕೇಷನಲ್ ಸೊಸೈಟಿಯ ಗೌರವಾನ್ವಿತ ಕಾರ್ಯದರ್ಶಿಗಳದ ಡಾ. ಸತೀಶ್ಚಂದ್ರ ಎಸ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ ಕಾಲ-ಕಾಲಕ್ಕೆ ತಕ್ಕಂತೆ ಎಲ್ಲಾ ಕ್ಷೇತ್ರಗಳಲ್ಲೂ ಬದಲಅವಣೆ ಸಹಜ,ಆ ಬದಲಾವಣೆಗೆ ನಾವು ಹೊಂದಿಕೊಳ್ಳದಿದ್ದರೆ ನಮಗೇ ನಷ್ಟವಾಗುತ್ತದೆ ಆದ್ದರಿಂದ ಹೊಸ ತನಕ್ಕೆ ನಮ್ಮನ್ನು ನಾವು ಹೊಂದಿಸಿಕೊಳ್ಳಬೇಕು.ಶಿಕ್ಷಣ ಕ್ಷೇತ್ರದಲ್ಲಿ ಶಿಕ್ಷಕರುಗಳು ಕಾಲಕ್ಕೆ ತಕ್ಕಂತೆ ಮೌಲ್ಯವರ್ಧನೆಗೊಂಡಾಗ ಮಾತ್ರ ವಿದ್ಯಾರ್ಥಿಗಳನ್ನೂ ಸಹ ಅದೇ ದಿಕ್ಕಿನಲ್ಲಿ ಪ್ರೇರೆಪಿಸಲಾಗುತ್ತದೆ ಹಾಗೂ ವಿದ್ಯಾರ್ಥಿಗಳೂ ಸಹ ನಮ್ಮಿಂದ ಪ್ರೇರಿತರಾಗುತ್ತಾರೆ.ಬಾಹ್ಯ ಸವಾಲುಗಳು ಸಾಕಷ್ಟು ಇದ್ದರೂ ಅದನ್ನು ನಿರ್ವಹಿಸುವ ಕೌಶಲ್ಯ ಹೋಂದುವುದೇ ಈ ಕಾರ್ಯಕ್ರಮದ ಉದ್ದೇಶ.ಶಿಕ್ಷಕ ಮೊದಲು ತನ್ನ ವೃತ್ತಿಯನ್ನು,ವಿಷಯವನ್ನು ಹಾಗೂ ತನ್ನ ವಿದ್ಯಾರ್ಥಿಗಳನ್ನು ಪ್ರೀತಿಸಿದಾಗ ಸಹಜವಾಗಿ ಶಿಕ್ಷಕ ಹಾಗೂ ವಿದ್ಯಾರ್ಥಿಗಳ ನಡುವೆ ಉತ್ತಮ ಬಾಂಧವ್ಯ ಎರ್ಪಡುತ್ತದೆ ಇದು ಇಬ್ಬರ ಉತ್ತಮ ಬೆಳವಣಿಗೆ ಒಟ್ಟಿಗೆ ಸಂಸ್ಥೆಯ ಬೆಳವಣಿಗೆಗೂ ಸಹಾಯವಾಗುತ್ತದೆ ಎಂದು ನುಡಿದು ಕಾರ್ಯಾಗಾರಕ್ಕೆ ಶುಭ ಹಾರೈಸಿದರು.
ಮೊದಲ ದಿನ ಗಣಿತ ವಿಷಯದ ಕುರಿತು ವಿಶೇಷ ತರಬೇತಿ ನೀಡಲು ಸಂಪನ್ಮೂಲ ವ್ಯಕ್ತಿಗಳಾಗಿ ಸೇಂಟ್ ಅಲೋಸಿಯಸ್ ಕಾಲೇಜು, ಮಂಗಳೂರಿನ ಗಣಿತ ವಿಭಾಗದ ನಿವೃತ್ತ ಪ್ರಾಧ್ಯಾಪಕ ಹಾಗೂ ವಿಭಾಗ ಮುಖ್ಯಸ್ಥ ಡಾ. ಜಾನ್ ಶೇರಾ ಹಾಗೂ ಪ್ರೊಫೆಸರ್ ಪ್ರಕಾಶ್ ಪ್ರಭು, ನಿವೃತ್ತ ಪ್ರಾಧ್ಯಾಪಕರು ಹಾಗೂ ವಿಭಾಗ ಮುಖ್ಯಸ್ಥರು, ಗಣಿತ ವಿಭಾಗ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸ್ವಾಯುತ್ತ ಕಾಲೇಜು, ಉಜಿರೆ ಇವರು ಭಾಗವಹಿಸಲಿದ್ದಾರೆ.
ಗಣಿತ,ಭೌತಶಾಸ್ತ್ರ,ಜೇವಶಾಸ್ತ್ರ ಹಾಗೂ ರಸಾಯನಶಾಸ್ತ್ರ ದ ಪ್ರತೀ ವಿಷಯಗಳಿಗೆ ಎರಡೆರಡು ದಿನಗಳಂತೆ ಜುಲೈ 02 ರ ತನಕ ನುರಿತ ವಿಷಯ ಸಂಪನ್ಮೂಲ ವ್ಯಕ್ತಿಗಳಿಂದ ಕಾರ್ಯಾಗಾರ ನಡೆಯಲಿದೆ.